Vachanas (ವಚನಗಳು)

vachanas header

ಬಾಯಿ ತುಂಬ ಮಾತನಾಡುವ ನಾವು ಯಾರಿಗಾದರೂ ಬದುಕು ಕೊಟ್ಟಿದ್ದೇವೆಯೇ?
ಬಡತನದ ಬಗ್ಗೆ ಪಿ.ಹೆಚ್.ಡಿ ಮಾತನಾಡುವ ನಾವು ಒಬ್ಬ ಬಡವನ ಕಣ್ಣೀರು ಒರಿಸಿದ್ದೇವೆಯೇ?
ತ್ಯಾಗದ ಕುರಿತು ಪರಿಷತ್ ಮಾತನಾಡುವ ನಾವು ತ್ಯಾಗಿಯಾಗಿ ಏನಾದರೂ ತ್ಯಾಗ ಮಾಡಿದ್ದೇವೆಯೇ?
ದೇಶದ ಸಮಸ್ಯೆ ಕುರಿತು ಮಾತನಾಡುವ ನಾವುದೇಶದ ಸಮಸ್ಯೆಗೆ ಪರಿಹಾರ ಹುಡುಕಿದ್ದೇವೆಯೇ?
ಗಂಟೆಗಟ್ಟಲೆ ಮಾತನಾಡುವ ನಾವು ಹುಕ್ಕೇರೀಶನ ಸಮಭಾವ ಅರಿತಿದ್ದೇವೆಯೇ?

ಪೆಟ್ಟನ್ನು ತಿಂದರೂ ಪಟ್ಟುಹಿಡಿದ ಫಟಿಂಗರಿಗೆ ನಮ್ಮ ನೆಲವನ್ನು ಬಿಡೆವು
ಉಪವಾಸ ಮಾಡಿದರೂ, ವನವಾಸ ಸೋಸಿದರೂ ನಮ್ಮ ತಾಯ್ನಾಡಿಗೆ ದ್ರೋಹ ಬಗೆದವರನ್ನು ಬಿಡೆವು
ಹುಕ್ಕೇರೀಶ ನಿನ್ನಾಣೆ ತಾಯಿ ಕನ್ನಡತಿಯ ಗೌರವಕ್ಕೆ ಧಕ್ಕೆತಾರೆವು!!

His Holiness

His Holiness

ಕನ್ನಡವೇ ಉಸಿರು ಕನ್ನಡವೇ ಬದುಕು ಅಂದರು ಅಂದಿನ ಕನ್ನಡಿಗರು
ಕನ್ನಡವನ್ನೇ ಕನ್ನಡಕ ಮಾಡಿಕೊಂಡು ಕನ್ನಡದ ಬಗ್ಗೆ ಮಾತನಾಡುವರಯ್ಯಾ ಇಂದು
ಹುಕ್ಕೇರೀಶ ಕನ್ನಡವನ್ನು ಕನ್ನಡಕ ಮಾಡಿಕೊಳ್ಳದೆ ಕಣ್ಣಾಗಿಸುವಂತೆ ಮಾಡಯ್ಯ!!

ಟೆಂಷನ್ಗೆ ನೀಡಿ ಪೆಂಷನ್
ಜೀವನಕ್ಕೊಂದಿರಲಿ ಇಂಟೆಂಷನ್
ನಿಮ್ಮ ಕೆಲಸದಲ್ಲಿಡಿ ಅಟೆಂಷನ್
ಆಗ ತಲುಪುವಿರಿ ನಿಮ್ಮ ಆ್ಯಂಬಿಷನ್
ಹುಕ್ಕೇರೀಶ ಲೈಫ್ ಟೈಮ್ ಇರಲಿ ಸಾಧನೆಯ ಡ್ಯುರೇಷನ್

ಆ ತತ್ವ ಒಬ್ಬ ಹೇಳಿದ
ಈ ತತ್ವ ಒಬ್ಬ ಹೇಳಿದ
ಆ ತತ್ವ ಈ ತತ್ವಗಳ ನಡುವೆ ಮನುಷತ್ವವನ್ನು ಮರೆತಿಹರಯ್ಯ
ಹುಕ್ಕೇರೀಶ ಇವರಲ್ಲಿ ಮನುಷತ್ವವನ್ನು ತುಂಬಿ ಮಾನವ ಧರ್ಮ ತತ್ವವನ್ನು ಬಿತ್ತಯ್ಯ.

ಮಠಾಧಿಪತಿಯಾದರೆ ಅಧಮರ್ಿಗಳ ಕಾಟ
ಸಂಸಾರಿಯಾದರೆ ಸತಿಸುತರ ಕಾಟ
ಜ್ಞಾನಿಯಾದರೆ ಮೂರ್ಖರ ಕಾಟ
ಆಸ್ತಿಕನಾದರೆ ನಾಸ್ತಿಕರ ಕಾಟ
ದೇಶ ಭಕ್ತನಾದರೆ ದೇಶದ್ರೋಹಿಗಳ ಕಾಟ
ಸ್ವದೇಶ ಪ್ರೇಮಿಯಾದರೆ ವಿದೇಶಿ ಮೋಹಿಗಳ ಕಾಟ
ಹುಕ್ಕೇರೀಶ ಈ ಕಾಟಗಳ ಕೂಟದಿಂದ ಎನ್ನನು ರಕ್ಷಿಸಯ್ಯ

ಬಿಚ್ಚು ನುಡಿಗೆ ಮೆಚ್ಚರಯ್ಯ ಈ ಜನಗಳುಕಿಚ್ಚು ಹಚ್ಚುವ ನುಡಿಗೆ ಕೈಜೋಡಿಸುವರು ನೋಡಯ್ಯ
ಸ್ವಚ್ಛ ಮನಕೆ ಮಾರುಹೋಗರಯ್ಯ ಈ ಜನಗಳುಬಣ್ಣದ ಬದುಕಿಗೆ ಮಾರುಹೋಗುವರು ನೋಡಯ್ಯ
ಹುಕ್ಕೇರೀಶ ಈ ಜನಗಳ ನಡುವೆ ಬದುಕುವುದು ಎಂತಯ್ಯ ?

ವೈಭವದಿಂದ ವೈರಾಗ್ಯದೆಡೆಗೆ ಕರೆದುಕೊಡು ಹೋಗುವುದಯ್ಯ ಹಿಂದೂ ಧರ್ಮ
ಅಭಿಮಾನದಿಂದ ನಿರಭಿಮಾನದ ಕಡೆಗೆ ಒಯ್ಯುವುದಯ್ಯ ವೀರಶೈವ ಧರ್ಮ
ಸ್ವಾರ್ಥದಿಂದ ನಿಸ್ವಾರ್ಥದೆಡೆಗೆ ಒಯ್ಯುವುದಯ್ಯ ಜೈನಧರ್ಮ
ಶಾಂತಿಯಲ್ಲಿ ಸದ್ಗತಿಯ ಕಾಣುವುದಯ್ಯ ಬೌದ್ಧ ಧರ್ಮ
ಸರ್ವರಲ್ಲಿ ಸಮಭಾವ ತುಂಬಿ ಸೇವೆ ಮಾಡುವುದಯ್ಯ ಕ್ರೈಸ್ತ ಧರ್ಮ
ಅನೇಕತೆಯಲ್ಲಿ ಏಕತೆಯ ತಿಳಿಸುವುದಯ್ಯ ಸಿಖ್ ಧರ್ಮ
ನಿಷ್ಟೆಯಲ್ಲಿ ಏಕದೇವೋಪಾಸನೆಯ ತಿಳಿಸುವುದಯ್ಯ ಇಸ್ಲಾಂ ಧರ್ಮ
ಹುಕ್ಕೇರೀಶ ಎಲ್ಲ ಧರ್ಮಗಳ ಮರ್ಮ ಒಂದೇ ಅಲ್ಲವೇನಯ್ಯ ?